ಪತ್ರಿಕಾ ಹೇಳಿಕೆ: 2013 ಕರ್ನಾಟಕ ವಿಧಾನಸಭಾ ಚುನಾವಣೆ

ಬಿ.ಟಿ. ಲಲಿತಾ ನಾಯಕ್, ಸಾತಿ ಸುಂದರೇಶ್,  ವಿಜಯಸಿಂಘ್ ಆರ್. ಡೇವಿಡ್ ಮತ್ತು ಕೆ. ನಾಗಭೂಷಣ್ ರಾವ್ ರವರನ್ನು  2013 ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚುನಾಯಿಸಬೇಕೆಂದು ಮತದಾರ ಭಾಂದವರಲ್ಲಿ ಆಗ್ರಹ

prvcandidates

1.  ಡಾ. ಬಿ.ಟಿ. ಲಲಿತಾ ನಾಯಕ್,  ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ,  ಬೆಂಗಳೂರು ನಗರ ಜಿಲ್ಲೆ,  ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ


2.  ಸಾತಿ ಸುಂದರೇಶ್,  ಮೂಡಿಗೆರೆ ವಿಧಾನಸಭಾ ಕ್ಷೇತ್ರ,  ಚಿಕ್ಕಮಗಳೂರು ಜಿಲ್ಲೆ,  ಭಾರತ ಕಮ್ಯೂನಿಸ್ಟ್ ಪಕ್ಷ 


3.  ವಿಜಯಸಿಂಘ್ ಆರ್. ಡೇವಿಡ್,  ವಿರಾಜಪೇಟೆ ವಿಧಾನಸಭಾ ಕ್ಷೇತ್ರ,  ಕೊಡಗು ಜಿಲ್ಲೆ,  ಸ್ವತಂತ್ರ ಅಭ್ಯರ್ಥಿ

4.  ಕೆ. ನಾಗಭೂಷಣ್ ರಾವ್,  ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ,  ಬಳ್ಳಾರಿ ಜಿಲ್ಲೆ, ಭಾರತ ಕಮ್ಯೂನಿಸ್ಟ್ ಪಕ್ಷ

ಹತ್ತರವಾದ ಪಾತ್ರವಹಿಸಿದ್ದಾರೆ. ಜಿಲ್ಲೆಯಲ್ಲಿ ಆದಿವಾಸಿಗಳು ಹಾಗೂ ಇತರೇ ಪಾರಂಪರಿಕ ಅರಣ್ಯ ವಾಸಿಗಳಾದ ಕೊಡವ, ಗೌಡ, ಐರಿ, ಕುಡಿಯ, ನಾಯಕ, ಬಿಲ್ಲವ, ಕಾಪಾಳ, ಪಾಲೆ, ಕೆಂಬಟ್ಟಿ ಮುಂತಾದ ಸಮುದಾಯಗಳಿಗೆ ಅವರ ಪಿತ್ರಾರ್ಜಿತ ಸ್ವತ್ತಾದಂತಹ ಅರಣ್ಯ ಭೂಮಿಯ ಅರಣ್ಯ ಹಕ್ಕನ್ನು ಗೌರವಿಸಿ ಹಕ್ಕುಪತ್ರ ನೀಡುವ ಪ್ರಕ್ರಿಯೆಯೆಡೆಗೆ ಕಾರ್ಯಪ್ರವೃತ್ತರಾಗಿದ್ದಾರೆ.

ಈ ಎಲ್ಲಾ ಮೇಲಿನ 4 ನಾಯಕರುಗಳು ಸ್ವಚ್ಛ, ಪ್ರಜಾಸತ್ತಾತ್ಮಕ, ಜಾತ್ಯತೀತ, ಮೌಲ್ಯಾಧಾರಿತ ರಾಜಕೀಯಕ್ಕಾಗಿ ಬದ್ದರಾಗಿದ್ದು ಹಲವಾರು ವರ್ಷಗಳಿಂದ ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಹೋರಾಟಗಳನ್ನು ನಡೆಸಿಕೊಂಡುಬರುತ್ತಿದ್ದಾರೆ. ಪ್ರಜಾ ರಾಜಕೀಯ ವೇದಿಕೆ ಸದಸ್ಯರು ಮತ್ತು ಮಿತ್ರರೆಲ್ಲರೂ ಸಕ್ರೀಯವಾಗಿ

ಈ ಮೇಲಿನ ಅಭ್ಯರ್ಥಿಗಳಿಗೆ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಈ ಎಲ್ಲಾ ಅಭ್ಯರ್ಥಿಗಳು ಆಯ್ಕೆಯಾಗಿ ಮುಂದಿನ ಕರ್ನಾಟಕ ವಿಧಾನಸಭೆಯಲ್ಲಿ ಬಡವರ, ಕಾರ್ಮಿಕರ, ಮಹಿಳೆಯರ, ದಲಿತರ, ಆದಿವಾಸಿಗಳ, ಹಿಂದುಳಿದ ವರ್ಗಗಳ, ಧಾರ್ಮಿಕ ಅಲ್ಪಸಂಖ್ಯಾತರ ಮತ್ತು ಸಮಾಜದಿಂದ ಅಂಚಿಗೆ ತಳ್ಳಲ್ಪಟ್ಟ ಸಮುದಾಯದವರ ಬಗ್ಗೆ ಕಾಳಜಿವಹಿಸಿ ಅವರ ಅವಶ್ಯಕತೆಗಳ ಇಡೇರಿಕೆಯನ್ನು ಎದುರು ನೋಡುತ್ತಿದ್ದೇವೆ. ಈ ಅಭ್ಯರ್ಥಿಗಳ ಚುನಾವಣೆ ಪ್ರಚಾರ ಕಾರ್ಯದಲ್ಲಿ ನೀವೆಲ್ಲರೂ ಕೈಜೋಡಿಸಬೇಕೆಂದು ಆಗ್ರಹಿಸುತ್ತಿದ್ದೇವೆ.

ಅಭ್ಯರ್ಥಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ:

ಡಾ. ಬಿ.ಟಿ. ಲಲಿತಾ ನಾಯಕ್: ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತೆ ಮತ್ತು ಸಮಾಜ ಸೇವಕರಾದ, ಡಾ. ಬಿ.ಟಿ. ಲಲಿತಾ ನಾಯಕ್ ರವರಿಗೆ ಕುವೆಂಪು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿದೆ. ಇವರು ಸುಮಾರು 16ರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದು ಇವರ ಬರಹಗಳಲ್ಲಿನ ಮಾನವೀಯತೆ, ಸಮಾನತೆ, ಸಾಮಾಜಿಕ ಶೋಷಣೆ ಮತ್ತು ಸಮಾಜಿಕ ನ್ಯಾಯ ಕುರಿತಾಗಿದೆ. ಈ ಬರಹಗಳಿಂದ ಪ್ರೇರಿತಗೊಂಡು ಇವರು ಜನತದಳ ಸೇರಿ ವಿಧಾನ ಪರಿಷತ್ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದು (1986-1992) ನಂತರ 1994-1999ರಲ್ಲಿ ಶಾಸಕಿಯಾಗಿ ಆಯ್ಕೆಯಾಗಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂತ್ರಿಯಾಗಿ ಸೇವೆಸಲ್ಲಿಸಿದ್ದಾರೆ.

ಸಾತಿ ಸುಂದರೇಶ್: ಕಸಬಾ ಹೋಬಳಿಯ ಹೆಸಗಲ್ ಗ್ರಾಮದ ದಲಿತ ಕಾಲೋನಿಯಲ್ಲಿ ವಾಸಿಯಾಗಿದ್ದು, ಸಿವಿಲ್ ಇಂಜಿನಿಯರಿಂಗ್‍ನಲ್ಲಿ ವ್ಯಾಸಂಗ ಮಾಡಿ 1988ರಿಂದಲೂ ಹಲವಾರು ಜನಪರ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಸತತವಾಗಿ 94 ದಿನ ನಡೆದ ಬಾಗೂರು ನವಿಲೆ ರೈತ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೋರಾಟ ತಿವ್ರವಾದಾಗ ಬಂಧನಕ್ಕೂಳಗಾಗಿ 9 ದಿನಗಳ ಜೈಲುವಾಸ ಆನಿಭವಿಸಿದ್ದಾರೆ. ಡಿಸೆಂಬರ್ 2000ರದಲ್ಲಿ ಕಾಫಿû ಬೆಳೆಗಾರರ ಮತ್ತು ಕಾರ್ಮಿಕರ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಲ್ಲದೇ, ಆಕ್ರಮ ಗಣಿಗಾರಿಕೆ ವಿರೋಧಿ ಹಾಗೂ ಬ್ರಷ್ಟಚಾರ ವಿರೋದಿ ಹಾಗೂ ಅರಣ್ಯವಾಸಿ ಕೃಷಿಕರನ್ನು ಒಕ್ಕಲೆಬ್ಬಿಸದಂತೆ ಆಗ್ರಹಿಸಿ ಹೋರಾಟಗಳನ್ನು ನಡೆಸಿದ್ದಾರೆ. ಕಡಿಮೆ ವೆಚ್ಚದ ಮಾದರಿ ಶೌಚಾಲಯ ವಿನ್ಯಾಸದ ಆವಿಷ್ಕಾರ ಮತ್ತು ಪ್ರಾಯೋಗಿಕವಾಗಿ ಮುತ್ತಿಕಟ್ಟೆ ಗ್ರಾಮದಲ್ಲಿ ವಿಮುಕ್ತಿ ಸಂಸ್ಥೆಯ ಸಹಕಾರದೂಂದಿಗೆ ಅನುಷ್ಠಾನಗೊಳಿಸಿ, ಯುನೆಸ್ಕೂ ತಂಡದಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ವಿಜಯಸಿಂಘ್ ಆರ್. ಡೇವಿಡ್: 58 ವರ್ಷ ಮುಗಿಸಿರುವ ವಿಜಯಸಿಂಘ್ ಆರ್. ಡೇವಿಡ್ ಕೊಡಗಿನ ಸುಂಠಿಕೊಪ್ಪದಲ್ಲಿ ಜನಿಸಿ, ಗೋಣಿಕೊಪ್ಪದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ, ಉನ್ನತ ವ್ಯಾಸಂಗವನ್ನು ಜಪಾನಿನಲ್ಲಿ ನಾಯಕತ್ವ ಮತ್ತು ಸಾವಯವ ಕೃಷಿ ಕುರಿತು ಪದವಿ ಪಡೆದು ಕಳೆದ 30 ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದವರ, ಆದಿವಾಸಿಗಳ ಮತ್ತು ಬಡ ಅರಣ್ಯ ಸಮುದಾಯದವರ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ. ಬಂಟ್ವಾಳ ತಾಲ್ಲೂಕಿನಲ್ಲಿ “ಉಳುವವನೇ ಭೂಮಿ ಒಡೆಯ” ಕಾಯ್ದೆ ಜಾರಿಗೆ ಬಂದ ಸಂದರ್ಭದಲ್ಲಿ ಹೋರಾಟ ನಡೆಸಿದ್ದಾರೆ. ಇದಲ್ಲದೇ ಅದಿವಾಸಿಗಳ ಸ್ವಯಂ ಆಡಳಿತವನ್ನು ಬೆಂಬಲಿಸಿ ಆದಿವಾಸಿ ಪಂಚಾಯತಿ ಕಾಯ್ದೆ ರಾಷ್ಟ್ರ ಮಟ್ಟದಲ್ಲಿ ಜಾರಿಗೆ ತರುವಲ್ಲಿ ಮ

ಕೆ. ನಾಗಭೂಷಣ್ ರಾವ್: ವೃತ್ತಿಯಲ್ಲಿ ವಕೀಲರಾಗಿರುವ ಕೆ. ನಾಗಭೂಷಣ್ ರಾವ್ ರವರು ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ವಿದ್ಯಾರ್ಥಿ ಜೀವನದಿಂದಲೇ ಸಾಮಾಜಿಕ ಚಳುವಳಿಗಳಲ್ಲಿ ತೊಡಗಿಸಿಕೊಂಡ ಹೋರಾಟಗಾರರು. ಅಕ್ರಮ ಗಣಿಗಾರಿಕೆಯ ವಿರುದ್ಧ,ಯ ರಾಷ್ಟ್ರೀಕರಣಕ್ಕಾಗಿ, ಪರಿಸರ ರಕ್ಷಣೆಗಾಗಿ, ಕೂಲಿ ಕಾರ್ಮಿಕರಿಗಾಗಿ ಹೋರಾಟಗಳನ್ನು ನಡೆಸಿದ್ದಾರೆ. ಗಣಿಗಳ್ಳರ ಪಿತೂರಿಯಿಂದ ಚಾಗನೂರು ರೈತರು ಭೂಮಿ ಕಳೆದುಕೊಂಡಾಗ ಬೀದಿಗಿಳಿದು ರೈತರ ಪರ ಹೋರಾಟ ಮಾಡಿದ್ದಲ್ಲದೇ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಭೂಮಿಯನ್ನು ಲಪಟಾಯಿಸುವ ಯತ್ನವನ್ನು ವಿರೋಧಿಸಿ ಹೋರಾಡಿ ಯಶಸ್ವಿಯಾಗಿದ್ದಾರೆ. ಬಳ್ಳಾರಿ ನಗರದಲ್ಲಿರುವ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಸಿಬ್ಬಂದಿ ನೇಮಕಾತಿಯಲ್ಲಿನ ಭ್ರಷ್ಠಾಚಾರವನ್ನು ವಿರೋಧಿಸಿದ್ದಲ್ಲದೇ, ಬಳ್ಳಾರಿಯನ್ನು ಹೈದರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ಸೇರಿಸಲು ಜಿಲ್ಲೆಯ ಹೋರಾಟದಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಮತದಾರ ಭಾಂದವರಲ್ಲಿ ಆಗ್ರಹ:

1. ಬಿಜೆಪಿ ಮತ್ತು ಕೆಜೆಪಿಯಂತಹ ಕೋಮುವಾದಿ ಪಕ್ಷಗಳಿಗೆ, ಕೋಮುವಾದಿ ಅಭ್ಯರ್ಥಿಗಳಿಗೆ ನಿಮ್ಮ ಮತ ನೀಡಬೇಡಿ
2. ನಿಮ್ಮ ಮತವನ್ನು ಹಣ, ಹೆಂಡ ಮತ್ತು ಇತರ ಅಮಿಶಗಳಿಗೆ ಮಾರಬೇಡಿ
3. ಭ್ರಷ್ಟರಲ್ಲದ, ಜಾತ್ಯತೀತ ಮತ್ತು ಆರ್ಥಿಕ/ಲಿಂಗ/ಸಾಮಾಜಿಕ ನ್ಯಾಯದ ಪರ ಇರುವ ಅಭ್ಯರ್ಥಿಗಳಿಗೆ ನಿಮ್ಮ ಮತ ನೀಡಿ ಬೆಂಬಲಿಸಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

88814 36660 (ವೀಣಾ), 9632223460 (ಮನೋಹರ್)

ಇವ್ಯಾಂಜೆಲೀನ್ ಅಂಡರ್ಸನ್ (ಅಧ್ಯಕ್ಷರು)     ವೀಣಾ ಎಸ್. (ಪ್ರಧಾನ ಕಾರ್ಯದರ್ಶಿ)     ಮಂಜುಳಾ ರಾವ್ (ಖಜಾಂಚಿ)    ನಾರಾಯಣಪ್ಪ (ಉಪಾಧ್ಯಕ್ಷರು)     ಮನೋಹರ್ ಎಲವರ್ತಿ (ಜಂಟಿ ಕಾರ್ಯದರ್ಶಿ)

ಡಾ. ಬಿ.ಟಿ. ಲಲಿತಾ ನಾಯಕ್, ಸಾತಿ ಸುಂದರೇಶ್, ವಿಜಯಸಿಂಘ್ ಆರ್. ಡೇವಿಡ್ ಮತ್ತು ಕೆ. ನಾಗಭೂಷಣ್ ರಾವ್ ಬಗ್ಗೆ ಹೆಚ್ಚಿನ ಮಾಹಿತಿ:

ಡಾ. ಬಿ.ಟಿ. ಲಲಿತಾ ನಾಯಕ್ 

ಸಾತಿ ಸುಂದರೇಶ್

ವಿಜಯಸಿಂಘ್ ಆರ್. ಡೇವಿಡ್

ಕೆ. ನಾಗಭೂಷಣ್ ರಾವ್ 

Advertisements

One comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s