About

ಪ್ರಜಾ ರಾಜಕೀಯ ವೇದಿಕೆ (PRV) ಕೆಲವು ಯುವಜನರ ಸಂಘಟಿತ ಪ್ರಯತ್ನವಾಗಿ 2009ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇಂದು ನಾವು ಕಾಣುತ್ತಿರುವ ಭ್ರಷ್ಟ, ಜಾತಿವಾದಿ, ಕೋಮುವಾದಿ, ಪ್ರಜಾಪ್ರಭುತ್ವ ವಿರೋಧಿ ಮತ್ತು ಜನವಿರೋಧಿ ರಾಜಕೀಯ ಸಂಸ್ಕೃತಿಯ ವಿರುದ್ಧ ನಾವು ಧ್ವನಿ ಎತ್ತುವ ಅವಶ್ಯಕತೆ ಇದೆ. ಇಂದಿನ ಎಲ್ಲಾ ರಾಜಕೀಯ ಪಕ್ಷಗಳು ಜಾತಿ-ಹಣ-ಹೆಂಡ-ಗೂಂಡಾ ರಾಜಕೀಯ ಮಾಡುತ್ತಿವೆ. ಇದರಿಂದ ಜನಸಾಮಾನ್ಯರು ಬೇಸತ್ತಿದ್ದಾರೆ. ಹೀಗಾಗಿಯೂ ಅನೇಕರು ಚುನಾವಣೆಗಳಲ್ಲಿ ಮತದಾನ ಮಾಡಲು ಮುಂದೆ ಬರುತ್ತಿಲ್ಲ. ಜನರಲ್ಲಿ ರಾಜಕೀಯದ ಬಗ್ಗೆ ನಂಬಿಕೆ ತೀವ್ರವಾಗಿ ಕಡಿಮೆಯಾಗುತ್ತಿದೆ. ಇದಕ್ಕಾಗಿ ಪ್ರಜ್ಞಾವಂತರು ರಾಜಕೀಯ ಕ್ಷೇತ್ರದಲ್ಲಿ ಪಾಲುಗೊಳ್ಳುವ ಮೂಲಕ, ರಾಜಕೀಯದಲ್ಲಿ ಜನರಿಗೆ ನಂಬಿಕೆ ಮೂಡುವ ರೀತಿಯಲ್ಲಿ ಕ್ರಿಯಾಶೀಲರಾಗಬೇಕಿದೆ. ನಾವು ಸ್ವಚ್ಛ, ಜಾತ್ಯತೀತ, ಪ್ರಜಾಸತ್ತಾತ್ಮಕ ಮತ್ತು ಮೌಲ್ಯಾಧಾರಿತ ರಾಜಕೀಯವನ್ನು ಪ್ರಸ್ತಾಪಿಸಿ, ಅದನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿ ಜನರನ್ನೂ ಪಾಲುಗೊಳ್ಳುವಂತೆ ಮಾಡುವಲ್ಲಿ ಸಫಲರಾಗಬೇಕಿದೆ. 
Praja Rajakiya Vedike (PRV) came into existence in 2009 due to the collective effort of a group of young people. We need to raise our voice against the corrupt, casteist, communal, undemocratic and anti-people political culture we see now. People are fed-up with the caste-money-liquor-goonda politics of all political parties now. As a result a many people are staying away from voting in the elections. People are rapidly loosing faith in politics. Socially concerned people should actively participate in politics and bring hope for people in politics again.

ಅನೇಕ ಪ್ರಗತಿಪರರು, ವಿವಿಧ ಸಮುದಾಯ ಸಂಘಟನೆಗಳ, ಕಾರ್ಮಿಕ ಸಂಘಗಳ, ಗುಂಪುಗಳ, ಚಳುವಳಿಗಳ ಮತ್ತು ವೇದಿಕೆಗಳ ಭಾಗವಾಗಿ ಮತ್ತು ವ್ಯಕ್ತಿಗಳಾಗಿ ಸಮಾನತೆ ಮತ್ತು ನ್ಯಾಯಾಧಾರಿತ ಸಮಾಜವನ್ನು ನಿರ್ಮಿಸುವ ದಿಕ್ಕಿನಲ್ಲಿ ಕಾರ್ಯನಿರತರಾಗಿದ್ದಾರೆ. ಇವರನ್ನು ಒಟ್ಟುಗೂಡಿಸಲು PRV ತನ್ನ ಮಿತಿಯಲ್ಲಿ ಕೆಲಸ ಮಾಡಲು ಬದ್ಧವಾಗಿದೆ. ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸುವ ಮತ್ತು ಬಲಗೊಳಿಸುವ ಧ್ಯೇಯವನ್ನು PRV ಹೊಂದಿದೆ. ಪ್ರತಿಯೊಬ್ಬರೂ ಜವಾಬ್ದಾರಿಯಿಂದ ತಮ್ಮ ರಾಜಕೀಯ ಹೊಣೆಗಾರಿಕೆಯನ್ನು ನಿರ್ವಹಿಸುವುದು ಅಗತ್ಯ ಎಂದು PRV ಬಲವಾಗಿ ನಂಬಿದೆ. 
Many progressive people are working as individuals or as part of various community organisations, trade unions, associations, movements and forums to build an equal and just society. PRV is committed to bring these people together. PRV aims to protect and strengthen our constitution and democratic system. PRV strongly believes that everyone need to participate in the political process and play their important role in fulfilling our political responsibility.

PRV ಸದಸ್ಯರು ವಿವಿಧ ಸಾಮಾಜಿಕ-ರಾಜಕೀಯ ಹಿನ್ನೆಲೆಗಳಿಂದ ಬಂದವರು. ಬುದ್ಧ, ಅಕ್ಕಮಹಾದೇವಿ, ಕಬೀರ, ಬಸವ, ಮಾರ್ಕ್ಸ್, ಫುಲೆ, ಗಾಂಧಿ, ಅಂಬೇಡ್ಕರ್, ಪೆರಿಯಾರ್, ಲೋಹಿಯಾ ಮತ್ತಿತರರ ಚಿಂತನೆ ಹಾಗೂ ಹೋರಾಟಗಳಿಂದ ಪ್ರೇರಣೆ ಪಡೆದವರು PRV ಯಲ್ಲಿ ಇದ್ದಾರೆ. PRVಯಲ್ಲಿ ಇನ್ನೊಬ್ಬರ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಮಾನ್ಯತೆ ಇದೆ. ತುಳಿತಕ್ಕೆ ಒಳಗಾದವರ ಜ್ಞಾನ-ಅನುಭವಗಳ ಆಧಾರದಲ್ಲಿ ನೂತನ ರಾಜಕೀಯ ತತ್ವ ಮತ್ತು ಸಮಾಜ ವ್ಯವಸ್ಥೆಯನ್ನು ನಿರ್ಮಾಣ ಮಾಡಲು PRV ಬದ್ಧವಾಗಿದೆ. ಮಹಿಳೆಯರು, ಬಡವರು, ರೈತರು, ಕಾರ್ಮಿಕರು, ದಲಿತರು, ಆದಿವಾಸಿಗಳು, ಹಿಂದುಳಿದವರು, ಧಾರ್ಮಿಕ/ ಭಾಷಾ/ ಪ್ರಾದೇಶಿಕ/ ಲಿಂಗತ್ವ/ ಲೈಂಗಿಕ ಅಲ್ಪಸಂಖ್ಯಾತರು, ಎಚ್.ಐ.ವಿ. ಸೋಂಕಿತರು, ವಿಕಲಚೇತನರು, ವಲಸಿಗರು ಮತ್ತಿತರ ಅಂಚಿಗೆ ತಳ್ಳಲ್ಪಟ್ಟ ಎಲ್ಲಾ ಅವಕಾಶವಂಚಿತರ ಹಿತ ಮತ್ತು ಸುಖದಲ್ಲೇ ಇಡೀ ಸಮಾಜದ ಹಿತ/ಸುಖ ಇದೆ ಎಂದು PRV ಬಲವಾಗಿ ನಂಬಿದೆ. ಇವರೆಲ್ಲರೂ PRV ನಡೆಸುವ ಎಲ್ಲಾ ಸಭೆಗಳಲ್ಲಿ ಪಾಲುಗೊಂಡು ಹತ್ತು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿ, ಅಗತ್ಯವಾಗುವ ನಿರ್ಣಯಗಳನ್ನು ಕೈಗೊಳ್ಳುತ್ತಾರೆ; ನಿರ್ಣಯಗಳನ್ನು ಜಾರಿಗೊಳಿಸುವ ಪ್ರಕ್ರಿಯೆಯಲ್ಲೂ ಸಕ್ರಿಯವಾಗಿ ಭಾಗಿಯಾಗುತ್ತಾರೆ. 
PRV members come from different socio-political backgrounds. Many members are inspired by many thinkers including Buddha, Akka Mahadevi, Kabir, Basava, Marx, Phule, Gandhi, Ambedkar, Periyar, Lohia and their struggles. There is respect for the opinions of others in PRV. PRV is committed to evolving a new political theory and practice and a social system that emerges from the knowledge-experiences of the exploited. PRV believes that the interest/good of the society is in the interest/good of women, poor, farmers, workers, dalits, adivasis, backward classes, religious/ linguistic/ regional/ gender/ sexual minorities, HIV positive people, people with disabilities, migrants and other exploited and marginalised people. All these people participate in the meetings of PRV, discuss on various issues and take necessary decisions and participate actively in implementing the decisions.

ಆಂತರಿಕ ಪ್ರಜಾಪ್ರಭುತ್ವ, ಸಮಾನತೆ, ಅಹಿಂಸೆ, ಹೊಣೆಗಾರಿಕೆ, ಪಾರದರ್ಶಕತೆ, ವೈವಿಧ್ಯತೆಗೆ-ಭಿನ್ನಾಭಿಪ್ರಾಯಕ್ಕೆ-ವ್ಯಕ್ತಿಸ್ವಾತಂತ್ರ್ಯಕ್ಕೆ ಗೌರವ/ ಮನ್ನಣೆ, ಭೌತಿಕ-ಆಧ್ಯಾತ್ಮಿಕ ಬೆಳವಣಿಗೆಗೆ ಅವಕಾಶ, ಸುಸ್ಥಿರ-ಸಮಗ್ರ-ಒಳಗೊಳ್ಳುವಿಕೆ ಅಭಿವೃಧ್ಧಿ, ಸಮಪಾಲು-ಸಮಬಾಳು ಇವು PRV ಮೌಲ್ಯಗಳು. ವರ್ಗ, ಜಾತಿ, ಬುಡಕಟ್ಟು, ಧರ್ಮ, ಭಾಷೆ, ಪ್ರದೇಶ, ವೃತ್ತಿ, ವಲಸೆ, ಪರಿಸರ, ಲಿಂಗ, ಲಿಂಗತ್ವ, ಲೈಂಗಿಕತೆ, ವಿಕಲಾಂಗತೆ ಮುಂತಾದ ಹಿನ್ನೆಲೆಯಲ್ಲಿ ಆಗುವ ಎಲ್ಲ ಬಗೆಯ ಅನ್ಯಾಯವನ್ನು ತೊಡೆದು ಹಾಕಲು PRV ಬದ್ಧವಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ, ಆಹಾರ, ನೀರು, ವಸತಿ, ಶಿಕ್ಷಣ, ಆರೋಗ್ಯ, ವಿದ್ಯುತ್, ಸಾರಿಗೆ ಸಂಪರ್ಕ, ಮನೋರಂಜನೆ ದೊರಕಬೇಕು; ಮುಖ್ಯವಾಗಿ ಅನಾಥರು, ವಿಕಲಚೇತನರು, ವೃದ್ಧರು, ಮಕ್ಕಳು, ಅಬಲರು ಸೇರಿದಂತೆ ಎಲ್ಲರಿಗೂ ಕನಿಷ್ಠ ಸಾಮಾಜಿಕ ಭದ್ರತೆ ಇರಬೇಕು; ಎಲ್ಲರೂ ಘನತೆ, ಗೌರವ, ನೆಮ್ಮದಿ, ಶಾಂತಿಯಿಂದ ಜೀವನ ನಡೆಸುವ ಅವಕಾಶವನ್ನು ಹೊಂದಿರಬೇಕು ಎಂಬುದು PRV ನಿಲುವಾಗಿದೆ. ಇಂಥ ಸಮಾಜ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದು PRV ಧ್ಯೇಯ. ಶ್ರೀಮಂತರಲ್ಲಿ ಬಹುಪಾಲು ಸಂಪತ್ತು ಶೇಖರಣೆ ಆಗಿರುವುದರಿಂದ, ಇವರ ಲಾಭ-ಅಧಿಕಾರದ ದುರಾಸೆಯಿಂದ ನಮ್ಮ ಸಮಾಜದಲ್ಲಿ ಬಹುಸಂಖ್ಯಾತ ದುಡಿಯುವ ಜನರು ಬಡವರಾಗಿದ್ದಾರೆ; ವಂಚಿತರಾಗಿದ್ದಾರೆ. ಬಹುಜನರಿಗೆ ಮತ್ತು ಪರಿಸರಕ್ಕೆ ಹಾನಿ ಉಂಟು ಮಾಡಿ, ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳುವ, ಈ ಮೂಲಕ ಅನ್ಯಾಯವನ್ನು ಎಸಗುವ ಬಂಡವಾಳಶಾಹಿ ವ್ಯವಸ್ಥೆಯನ್ನು PRV ವಿರೋಧಿಸುತ್ತದೆ. ಜಾತಿಪದ್ಧತಿಯ ಮೂಲ ಆಧಾರವಾದ ಬ್ರಾಹ್ಮಣಶಾಹಿಯನ್ನೂ PRV ವಿರೋಧಿಸುತ್ತದೆ.
Internal democracy, equality, non-violence, accountability, transparency, respecting diversity-individual freedom-difference of opinions, opportunities for material-spiritual development, sustainable-integral-inclusive development and distributive justice are PRV’s values. PRV is committed ending injustice in the context of class, caste, ethnicity, race, religion, language, region, occupation, migration, ecology, gender, sex, sexuality, disability etc. Everyone in the society should get employment, food, water, shelter, education, health, electricity, transportation, recreation; social protection for everyone and particularly for the most needy including orphans, disabled, weak, old and children; PRV believes in everyone having opportunity in leading a life with dignity, respect, comfort and peace. Building such a society is the goal of PRV. The majority working people of our society are poor as most of the power ad resources are in the hands of rich people who are profiting-benefiting at the cost of other. PRV is opposed to the capitalist system where companies exploit and make huge profits at the cost of people and environment. PRV is opposed to Brahmanism on which the caste system is built.

ಸಮಾಜವಾದ ಸಿದ್ಧಾಂತದಲ್ಲಿ PRV ನಂಬಿಕೆ ಇಟ್ಟಿದೆ. ಸಹಕಾರ-ಸೌಹಾರ್ದ-ನ್ಯಾಯ ಆಧರಿಸಿದ ವ್ಯವಸ್ಥೆಯನ್ನು ನಿರ್ಮಿಸಲು ಮತ್ತು ಪರಿಸರಸ್ನೇಹಿ ಅಭಿವೃದ್ಧಿಗೆ PRV ಬದ್ಧವಾಗಿದೆ. ಸರ್ಕಾರ ಮತ್ತು ಸರ್ಕಾರೇತರ ಹುದ್ದೆಗಳಲ್ಲಿ ಮಹಿಳೆಯರಿಗೆ ಅರ್ಧ ಭಾಗ ಪಾಲು ದೊರಕಬೇಕು ಎಂಬುದು PRV ನಿಲುವು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳೇ ಅಲ್ಲದೆ ಅಂಚಿಗೆ ತಳ್ಳಲ್ಪಟ್ಟಿರುವ ಜನರ ಅಭಿವೃದ್ಧಿಗಾಗಿ ಮೀಸಲಾತಿ ಮತ್ತು ವಿಶೇಷ ಅವಕಾಶಗಳು ದೊರಕಬೇಕು. ಊಳಿಗಮಾನ್ಯ ಪದ್ಧತಿ, ಧಾರ್ಮಿಕ ಮೂಲಭೂತವಾದ, ಜಾತಿವಾದ, ಕೋಮುವಾದಗಳನ್ನೂ PRV ವಿರೋಧಿಸುತ್ತದೆ.
PRV believes in socialism. PRV is committed to building an economic system based on cooperation, solidarity, justice and that is environment-friendly. PRV stands for women occupying half of the positions of power in government and outside. PRV supports affirmative action (in the form of reservations and special opportunities) for the empowerment of SC, ST, BC, minorities and all other marginalised people. We are opposed to feudalism, casteism, religious fundamentalism and communalism.

ಭಾರತದ ಸಂವಿಧಾನದಲ್ಲಿ PRV ಸಂಪೂರ್ಣ ವಿಶ್ವಾಸವನ್ನು ಇಟ್ಟಿದೆ; ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಬದ್ಧವಾಗಿದೆ. ಮಾಧ್ಯಮ ಮತ್ತು ಅಂತರ್ಜಾಲದ ಮೇಲೆ ಸಮುಚಿತವಲ್ಲದ ನಿರ್ಬಂಧಗಳನ್ನು PRV ವಿರೋಧಿಸುತ್ತದೆ. ಚುನಾವಣಾ ಸುಧಾರಣೆಗೆ ಆದ್ಯತೆಯನ್ನು ನೀಡಬೇಕು ಎಂದು ಪ್ರತಿಪಾದಿಸುವ PRV, ಈಗಿನ ತುಲನಾತ್ಮಕ ಬಹುಮತ ಪದ್ಧತಿ (First-Past-The-Post, FPTP) ಯನ್ನು ಬದಲಾಯಿಸಿ, ಚುನಾವಣೆಯಲ್ಲಿ ಪಕ್ಷವೊಂದು ಗಳಿಸಿದ ಮತಗಳ ಅನುಪಾತದ ಆಧಾರದಲ್ಲಿ ಶಾಸನ ಸಭೆಗಳಲ್ಲಿ ಸೀಟು ಹಂಚಿಕೆಯಾಗುವ ಪದ್ಧತಿಯನ್ನು ಪ್ರತಿಪಾದಿಸುತ್ತದೆ.
PRV completely believes in Indian constitution; and is committed to freedom of speech and expression. PRV opposes unfair censorship/restrictions of media and the internet. PRV stresses the urgent/priority need for electoral reforms, and advocates for changing the present FPTP (first-past-the-post) electoral system into proportional electoral system where the seats in the assembly/ loksabha are allocated based on the percentage of votes polled by each party.

ಸಂವಿಧಾನವು ಎತ್ತಿ ಹಿಡಿದಿರುವ ಒಕ್ಕೂಟ ಪದ್ಧತಿಯನ್ನು ಒಪ್ಪಿರುವ PRV, ದೇಶದಲ್ಲಿ ಅಧಿಕಾರವು ಸಂಪೂರ್ಣವಾಗಿ ವಿಕೇಂದ್ರೀಕರಣ ಆಗಬೇಕೆಂದು ಆಗ್ರಹಪಡಿಸುತ್ತದೆ; ಗ್ರಾಮ, ತಾಲ್ಲೂಕು, ಪಟ್ಟಣ, ಜಿಲ್ಲಾ ಪಂಚಾಯತಿಗಳಿಗೆ ಮತ್ತು ಪುರಸಭೆ/ನಗರಸಭೆ/ಮಹಾನಗರ ಪಾಲಿಕೆಗಳಿಗೆ ಗರಿಷ್ಠ ಅಧಿಕಾರ ದೊರಕಬೇಕೆಂದು ಒತ್ತಾಯಿಸುತ್ತದೆ.
PRV believes in the federal structure enshrined in Indian constitution; demands for the complete decentralisation and devolution of power in the country; and demands maximum power to village/ taluk/ town/ district panchayats, municipalities and city corporations.

ಜನರಲ್ಲಿ ರಾಜಕೀಯ ತಿಳುವಳಿಕೆಯನ್ನು ಬೆಳೆಸುವ, ವಿಸ್ತಾರಗೊಳಿಸುವ ಕಾರ್ಯವನ್ನು PRV ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಬಯಸಿದೆ. ವಿವಿಧ ಹಂತಗಳಲ್ಲಿ ಅಗತ್ಯವಾದ ಚರ್ಚೆ, ವಿಚಾರ ವಿನಿಮಯ ನಡೆಸಿ, ತನ್ನ ಧ್ಯೇಯ-ಧೋರಣೆಗೆ ಅನುಗುಣವಾಗಿ PRV ನಿರ್ಣಯ ಕೈಗೊಳ್ಳುತ್ತದೆ. ಸಂಕೀರ್ಣ ಸಮಸ್ಯೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿ PRV ತನ್ನ ಸದಸ್ಯರ ಮತ್ತು ವಿಶಾಲ ಸಮಾಜದ ಅಭಿಪ್ರಾಯ, ಚಿಂತನೆಗೆ ಮುಕ್ತ ಅವಕಾಶವನ್ನು ಒದಗಿಸುತ್ತದೆ. 
PRV is taking up the activity of building and expanding people’s political awareness as a priority. PRV makes decisions after sharing information and opinions and holding required discussions at various levels and in-line with its aims-objectives-philosophy. In the process of finding solutions for the complex problems, PRV provides open opportunity for the views, discussions and debates of its members and larger society.

PRV ಒಂದು ವಿನೂತನ ಪ್ರಯತ್ನ. ಇದಕ್ಕೆ ಎಲ್ಲಾ ಜನರ ಸಲಹೆ, ಸಹಕಾರಗಳು ಅತ್ಯಗತ್ಯ. ಬನ್ನಿ, PRV ಯನ್ನು ಅರಿತುಕೊಳ್ಳಿ; ತಿದ್ದಲು ಮುಂದಾಗಿ; ಆರೋಗ್ಯಕರ ಸಮಾಜ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ನಮ್ಮ ಪಾಲಿನ ಕಿಂಚಿತ್ ಕರ್ತವ್ಯವನ್ನು ನಿರ್ವಹಿಸೋಣ.
PRV is a new process. It needs the advice/support and cooperation of all people. Come, understand PRV; contribute to the evolution of PRV; lets fulfil our part of the responsibility to build an healthy society.

ಪ್ರಜಾಪ್ರಭುತ್ವವನ್ನು ಸಂರಕ್ಷಿಸೋಣ Lets Defend Democracy

ಸಂವಿಧಾನದ ಆಶಯವನ್ನು ಸಾಕಾರಗೊಳಿಸೋಣ Make Real the Constitutional Ideals

Phone: 96322 23460, 94839 50202

Email: prajarajakiya@gmail.com

Facebook: http://www.facebook.com/prajarajakiya

Twitter: http://twitter.com/prajarajakiya

Google+: http://plus.google.com/104359920110514348821

Address: D2, Jyothi Elegant, Nanjamma Layout, RT Nagar, Bangalore – 32

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s